ಅನ್ನಾ ಕರೆನೀನಾ (ರಷ್ಯಾದ ಭಾಷೆ: Анна Каренина) (ಕೆಲವೊಮ್ಮೆ ಆನಾ ಕರೆನಿನ್ ಎಂದು ಆಂಗ್ಲೀಕರಿಸಲಾದ) ೧೮೭೩ರಿಂದ ೧೮೭೭ರ ವರೆಗೆ ದ ರಷ್ಯನ್ ಮೆಸೆಂಜರ್ ನಿಯತಕಾಲಿಕದಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾದ ರಷ್ಯಾದ ಲೇಖಕ ಲಿಯೊ ಟಾಲ್‍ಸ್ಟಾಯ್‌ಯವರ ಒಂದು ಕಾದಂಬರಿ. ಮೊದಲ ಕಂತಿನ ಸಮಯದಲ್ಲಿ ಹುಟ್ಟಿದ ವಿಷಯಗಳ ಸಂಬಂಧವಾಗಿ ಅದರ ಸಂಪಾದಕ ಮಿಖಯ್ಲ್ ಕೆಟ್ಕಾಬ್ ಮತ್ತು ಟಾಲ್‌ಸ್ಟಾಯ್‌ಯವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು; ಹಾಗಾಗಿ, ಕಾದಂಬರಿಯ ಮೊದಲ ಪ್ರಕಾಶನ ಪುಸ್ತಕ ರೂಪದಲ್ಲಿತ್ತು.ಇದು ಸರ್ವಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. == ಕನ್ನಡದಲ್ಲಿ == ಇದನ್ನು ದೇ.ಜವರೇಗೌಡ ರು "ಅನ್ನ ಕರೆನಿನ" ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜೀವನದಲ್ಲಿ ಭಾವುಕತೆ ಮತ್ತು ನೈತಿಕತೆಗಳ ಕುರಿತಾಗಿದೆ ಈ ಕಾದಂಬರಿ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2021-05-18 ವೇಬ್ಯಾಕ್ ಮೆಷಿನ್ ನಲ್ಲಿ.